ಹಾಡು: ಚೋರರಿಗೊಂದು ಕಾಲ
ಚಿತ್ರ: ಮೋಜುಗಾರ ಸೊಗಸುಗಾರ (1995 )
ನಿರ್ದೇಶಕ: ವಿಜಯ್
ನಿರ್ಮಾಪಕ: ಏನ್. ಕುಮಾರ್
ಸಂಗೀತ: ಹಂಸಲೇಖ
Chorarigondu Kaala Song lyrics in Kannada
ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕೂ ಒಂದು ಕಾಲ
ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೆ
ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕೂ ಒಂದು ಕಾಲ
ಸಹನೆ ಶರಣಾಗತಿ ಅಲ್ಲಾ
ಕರುಣೆ ಬಲಹೀನತೆ ಅಲ್ಲಾ
ಧರ್ಮ ದಯವಿರುವ ಸಾಗರ
ದುಷ್ಟಾ ನೀನೆಲ್ಲವು ಅಲ್ಲಾ
ನಿನಗೆ ಅಮೃತವು ಇಲ್ಲಾ
ನಾನೇ ನಿನ್ನ ನುಂಗೋ ನಾಗರ
ಒಳ್ಳೆ ಜನಕೆ ಒಳ್ಳೆ ತನಕೆ
ಕೇಳೋ ಮೂರ್ಖ ಸೋಲಿಲ್ಲ
ನಮ್ಮದೇ ಜಯಭೇರಿ
ನಿಮ್ಮಾ ಪಾಪದ ಬಿಂದಿಗೆಯಲ್ಲಿ
ಹೊಸ ಪಾಪಕೆ ಸ್ಥಳವಿಲ್ಲಾ
ನರಕಕೆ ಸವಾರಿ
ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕೂ ಒಂದು ಕಾಲ
ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೆ
ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕೂ ಒಂದು ಕಾಲ
ನೂರು ಕಲಿ ರಾಯನ ಕೈಲೀ
ಒಂದೇ ಒಂದಿರುವುದು ಖಡ್ಗ
ಅನ್ಯಾಯದ ಕಳೆಯ ಕಡಿಯಲು
ಭೂಮಿ ಮೇಲೆಲ್ಲಾ ಸುತ್ತಿ
ನಿಮ್ಮ ಕುಲದವರ ಕೆತ್ತಿ
ಬರಲು ಹೊತ್ತಾಯ್ತು ಕುಡು-ಗಗಲು
ನಿನ್ನಾ ಹೆಗಲೇ ನನ್ನಾ ಕುದುರೆ
ನಡಿ ನಾಕು ಕಾಲಲ್ಲಿ
ನಮ್ಮದೇ ರಣಭೇರಿ
ನಿಮ್ಮಾ ಗುಣವೇ ನಿಮ್ಮಾ ವೈರೀ
ನೀವೇ ನಿಮಗೆ ಯಮ ಪಾಶಾ
ನರಕಕೆ ಸವಾರಿ
ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕೂ ಒಂದು ಕಾಲ
ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೆ
ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕೂ ಒಂದು ಕಾಲ
0 ಕಾಮೆಂಟ್‌ಗಳು