ಎಕ್ಸ್ ಕ್ಯೂಸ್ ಮಿ - ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ lyrics in Kannada


 

ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ

ಭೂಮಿಗೆ ತಂದು ಎಸೆದ

ಹಂಚಲು ಹೋಗಿ ಬೇಸರವಾಗಿ

ಹಂಚಿಕೋ ಹೋಗಿ ಎಂದ

ಕೊನೆಗೂ ಸಿಗದೇ ಪ್ರೀತಿ

ಬದುಕು ರಣಭೂಮಿ ಜಯಿಸಲಿ ಪ್ರೇಮಿ

ಬದುಕು ರಣಭೂಮಿ ಜಯಿಸಲಿ ಪ್ರೇಮಿ

 

||ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ

ಭೂಮಿಗೆ ತಂದು ಎಸೆದ ||


ಅವನ ಅವಳ ಬದುಕು ಮುಗಿದರೂನು

ಅವರ ಪ್ರೀತಿ ಗುರುತು ಸಾಯದಿನ್ನು

ಬಿರುಗಾಳಿಗೆ ಸೂರ್ಯ ಹಾರಿ ಹೋದರು

ಪ್ರೀತಿಯು ಹಾರದು ….

ಈ ಜಗದ ಎಲ್ಲ ಗಡಿಯಾರ ನಿಂತರು

ಪ್ರೀತಿಯು ನಿಲ್ಲದು…..

ಬದುಕು ಸುಡುಭೂಮಿ ನಡುಗನು ಪ್ರೇಮಿ

ಬದುಕು ಸುಡುಭೂಮಿ ನಡುಗನು ಪ್ರೇಮಿ

 

||ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ

ಭೂಮಿಗೆ ತಂದು ಎಸೆದ

ಹಂಚಲು ಹೋಗಿ ಬೇಸರವಾಗಿ

ಹಂಚಿಕೋ ಹೋಗಿ ಎಂದ ||


ಯಮನು ಶರಣು ಎನುವ ಪ್ರೀತಿ ಮುಂದೆ

ಧನಿಕ ತಿರುಕ ಪ್ರೀತಿ ಮುಂದೆ ಒಂದೆ

ಹಳೆ ಗಾದೆ ವೇದಾಂತ ಬೂದಿಯಾದರು

ಪ್ರೀತಿಯು ಸಾಯದು

ತಿರುಗಾಡುವ ಭೂಮಿ ನಿಂತೆ ಹೋದರು

ಪ್ರೀತಿಯು ನಿಲ್ಲದು

ಬದುಕು ಮರುಭೂಮಿ ಮಳೆ ಹನಿ ಪ್ರೇಮಿ

ಬದುಕು ಮರುಭೂಮಿ ಮಳೆ ಹನಿ ಪ್ರೇಮಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು