ಸ್ವಾಮಿ ಅಯ್ಯಪ್ಪ ಸಾಂಗ್ lyrics in Kannada


 

ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ

ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ


ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಸ್ವಾಮಿಯೇ ಶರಣಂ ಅಯ್ಯಪ್ಪ


ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ


ತಲೆ ಮೇಲೆ ನಿನ್ನ ಇರುಮುಡಿ ಇರಲು

ಮನದಲ್ಲಿ ನೋಡೋ ಆಸೆ ತುಂಬಿರಲು

ಸ್ವಾಮಿ ಅಯ್ಯಪ್ಪ ಶರಣು ಎನುತಲಿರಳು

ಕಲ್ಲು ಮುಳ್ಳೆಲ್ಲ ಕಲ್ಗೆ ಹೂವುಗಳು

ಏರಿ ಮೇಲೆ ಅಲ್ಲಿ ಕುಣಿಯುವರು ಎಲ್ಲಾ

ಆನಂದದಿಂದ ಹಾಡುವರಿಲ್ಲಾ 

ಸ್ವಾಮಿ ತಿಂದಕ ತೋಮ್

ಅಯ್ಯಪ್ಪ ತಿಂದಕ ತೋಮ್

ಅಯ್ಯಪ್ಪ ತಿಂದಕ ತೋಮ್

ಸ್ವಾಮಿ ತಿಂದಕ ತೋಮ್

ಸ್ವಾಮಿ ತಿಂದಕ ತೋಮ್ ತೋಮ್ 

ಅಯ್ಯಪ್ಪ ತಿಂದಕ ತೋಮ್ ತೋಮ್

ಅಯ್ಯಪ್ಪ ತಿಂದಕ ತೋಮ್ ತೋಮ್

ಸ್ವಾಮಿ ತಿಂದಕ ತೋಮ್ ತೋಮ್ 


ಏರಿ ಮೇಲೆ ಅಲ್ಲಿ ಕುಣಿಯುವರು ಎಲ್ಲಾ

ಆನಂದದಿಂದ ಹಾಡದವರಿಲ್ಲಾ

ಎಂದೆಂದೂ ಅಲ್ಲಿ ಜಾತಿ ಮಾತಿಲ್ಲ

ಸ್ವಾಮಿ ಎದುರಲ್ಲಿ ಒಂದೇ ಜನರೆಲ್ಲಾ

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪಾ


ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ


 ಕಂಡಾಗ ಅಳುದಾ ನದಿಯನ್ನು ಕಣ್ಣು

ನೀರಲ್ಲಿ ಇಡಲು ಈ ಕಾಲ್ಗಳನ್ನೂ

ನೋವೆಲ್ಲ ಮರೆತು ಸಂತೋಷವೇನೊ

ಶರಣೆಂಬ ಕೂಗೇ ಇಲ್ಲ ಬೇರೇನೂ

ಕರಿಮಲೆಯ ಮೇಲೆ ನಡೆವಾಗ ನೀನು

ಎಲ್ಲೆಲ್ಲೂ ಬೀಸೋ ತಂಗಾಳಿ ಏನೂ

ಬಲು ಕಠಿಣವಾದ ಆ ಬೆಟ್ಟವನ್ನು

ಏರಿ ಇಳಿವಾಗ ಆ ತೃಪ್ತಿಯೇನೂ


ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪಾ

ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ


ಪಂಪೆಯಲಿ ಸ್ನಾನ ದೇವರ ಧ್ಯಾನ

ಪಂಪೆಯಲಿ ಸ್ನಾನ ದೇವರ ಧ್ಯಾನ

ನೀಗುವುದೂ ಎಲ್ಲ ಆಯಾಸವನ್ನ

ನದಿಯಲ್ಲಿ ಬಿಡುವ ಹಣತೆಗಳ ಸಾಲು

ನೋಡುವುದೇ ಭಾಗ್ಯ ತೇಲಾಡುತಿರಲೂ

ಮೊದಲ ಸಲ ಗಿರಿಗೆ ಬರುವ ಜನರೆಲ್ಲಾ

ಶಬರಿ ಪೀಠಕೆ ನಮಿಸಿ ನಡೆಯುವರೆಲ್ಲಾ

ಶರಂಗುತ್ತಿಯಾ ಲಿಲ್ಲ ಲಂಬನ್ನು ಎಸೆದು

ನಡೆಯುವರು ಮುಂದೆ ಸ್ವಾಮಿಯ ನೆನೆದು


ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪಾ

ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ


ಕಡಲಲೆಯ ಹಾಗೇ ಬರುತಿರುವ ಜನರು

ಭಕ್ತಿಯೇ ಅಲ್ಲಿ ಎಲ್ಲರ ಉಸಿರೂ

ಹದಿನೆಂಟು ಮೆಟ್ಟಿಲ ಏರುತ್ತಲಿರಲು

ಎಲ್ಲರೆದೆಯಲ್ಲಿ ಹರುಷದ ಹೊನಲು

ತುಪ್ಪದ ಅಭಿಷೇಕ ಗಂಧದ ಅಭಿಷೇಕ

ಧರ್ಮಶಾಸ್ತ್ರನಿಗೆ ಹಲವು ಅಭಿಷೇಕ

ಕೋಟಿ ಕಂಗಳಿಗೆ ಅದು ದೇವಲೋಕ

ನಿಜವಾಗಿ ಅಂದೇ ಬದುಕಿದ್ದು ಸ್ವಾರ್ಥಕ



ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪಾ

ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ

ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ

ಓಂ ಓಂ ಅಯ್ಯಪ್ಪ (ಓಂ ಗುರುನಾಥ ಅಯ್ಯಪ್ಪ )

ಓಂ ಓಂ ಅಯ್ಯಪ್ಪ (ಓಂ ಗುರುನಾಥ ಅಯ್ಯಪ್ಪ )

ಓಂ ಓಂ ಅಯ್ಯಪ್ಪ (ಓಂ ಗುರುನಾಥ ಅಯ್ಯಪ್ಪ )

ವರುಷಕ್ಕೆ ಒಮ್ಮೆ ದೇವರಿಗೆ ಇಡುವಾ 

ಒಡವೆಗಳು ಇರುವಾ ಪೆಟ್ಟಿಗೆಯು ಬರುವಾಆ 

ದೃಶ್ಯವನ್ನು ಕಾಣುವುದೇ ಭಾಗ್ಯ

ನೂರು ಜನುಮಗಳು ತಂದಿರುವ ಪುಣ್ಯ

ಅಲಂಕಾರವೆಲ್ಲಾ ಮುಗಿದಾದ ಮೇಲೆ 

ಕರ್ಪುರದಿಂದ ಬೆಳಗುವ ವೇಳೆ 

ಬಾನಲ್ಲಿ ಮೂಡಿ ಬರುವುದು ಜ್ಯೋತಿ 

ಬೆಳಗುವುದು ಬೆಳಗುವುದು ಆನಂದ ಜ್ಯೋತಿ 

ಬೆಳಗುವುದು ಬೆಳಗುವುದು ಆನಂದ ಜ್ಯೋತಿ

ಸ್ವಾಮಿಯೇ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ 

ಸ್ವಾಮಿಯೇ..... ಅಯ್ಯಪ್ಪ ಶರಣಂ ಅಯ್ಯಪ್ಪ 

ಸ್ವಾಮಿಯೇ..... ಅಯ್ಯಪ್ಪ ಶರಣಂ ಅಯ್ಯಪ್ಪ ಸ್ವಾಮಿಯೇ..... ಅಯ್ಯಪ್ಪ ಶರಣಂ ಅಯ್ಯಪ್ಪ








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು