ಯಜಮಾನ ಯಜಮಾನ ನಿನಗಿಂತಲೂ ಸಿರಿಯೇನಾ lyrics in Kannada


 ಯಜಮಾನ ಯಜಮಾನ ನಿನಗಿಂತಲೂ ಸಿರಿಯೇನಾ


ಓ ಓ ಓ ಓ ಓ


ಯಜಮಾನ ಯಜಮಾನ


ನಿನಗಿಂತಲೂ ಸಿರಿಯೇನಾ (2)


 


ಓ...ಹೊಂಬಾಳೆ ಚೆಲುವೆ


ನಿನ್ನ ನಗುವಲ್ಲಿ ಸುರೀತಾವೆ


ಮುತ್ತಿನ ಹರಳು


ಓ... ನನ್ನಾಸೆ ಒಲವೇ...


ನಿನ್ನ ಮಾತಲ್ಲಿ ಚೆಲ್ತಾವೆ


ರತ್ನದ ಹರಳು...


ಯಜಮಾನ ಯಜಮಾನ


ನಿನಗಿಂತಲೂ ಸಿರಿಯೇನಾ ಓ...


 


ನೀ ಬಯಸೋ ತೊಟ್ಟಿಲಿಗೆ


ಬಿಳಿಗಿರಿಯ ಮರ ತಂದೇ


ಆ ಚನ್ನಪಟ್ಟಣದ


ಕರ ಕುಶಲರಿಗರ ಕರೆದೆ


ಶ್ರೀ ವಾರ ಪಟ್ಟಣದ


ಶಿಲ್ಪಿಗಳ ಕರೆ ತಂದೆ


ಬೆಳ್ಳಿಯ ಘಂಟೆಗಳ


ಅದರೊಳಗೇ ಸೇರಿಸಿದೇ


ಆ ಕುಚಗಳ ತಂದು


ಇಲ್ಲಿ ಬಣ್ಣ ಭೀರಿಸಿ


ಆ ತಾರೆಗಳ ತಂದು


ಇಲ್ಲಿ ಅಲಂಕರಿಸಿ


ಏನ್ರಿ... ಸರೀನಾ...


ಆ ಸಿಂಹಾದ್ರಿ ಕುಲದ


ಸೊಸೆ ನೀನು ನಿನಗೇನೂ


ಕಮ್ಮಿ ಹೇಳು...


ಯಜಮಾನ ಯಜಮಾನ


ನಿನಗಿಂತಲೂ ಸಿರಿಯೇನಾ


ಮಾವಿನಕಾಯಿ ತೋರಣವೂ


ಮಾವ ತಂದ ಉಡುಗೊರೆಯೂ


ಬಯಕೆ ತೀರದೆ ಈಗ


ಬಯಸಿದೆನೋ ಬೇರೇನೋ


ಹುಣಿಸೇಕಾಯಿ ಸಿಪ್ಪೆ ತೆಗೆದೂ


ಅದಕೆ ಸ್ವಲ್ಪ ಉಪ್ಪ ಬೆಸೆದು


ಮಡಕೆಯಲಿ ಸ್ವಲ್ಪ ನೆನೆಸಿ


ತಿಂದರೆ ಬಯಕೆ ತೀರತದಾ


ಓ... ಭಾವಾ ನೀನು ಕೈ


ನಿಂದ ಬಳೆ ತೊಡಿಸು


ಎ ಅಕ್ಕ ನನ್ನ ಮುಡಿಗೀಗ


ಹೂವ ಮುಡಿಸು


ಏನ್ರಿ... ಸರೀನಾ...


ಈ ಸಿಂಹಾದ್ರಿ ಕುಲದ


ಸೊಸೆ ನಾನು ನನಗೇನು


ಕಮ್ಮಿ ಹೇಳು...


ಯಜಮಾನಿ ಯಜಮಾನಿ


ಪ್ರೀತಿ ಹೊತ್ತು ತರುವೆ ನಾ... ಆಹ್ಹಾ.


ಯಜಮಾನಿ ಯಜಮಾನಿ


ಪ್ರೀತಿ ಹೊತ್ತು ತರುವೆ ನಾ.


 


ಓ... ಹತ್ತೂರ ಸಿರಿಯೇ...


ನಿನ್ನ ಪ್ರೀತೀಲಿ ಸುರೀತಾವೇ


ಮುತ್ತಿನ ಹರಳು


ಓ... ನನ್ನಾಸೆ ಒಲವೇ...


ನಿನ್ನ ಎದೆಯಿಂದ ಚಿಮ್ಮುತಿದೆ


ರತ್ನದ ಹರಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು