ಭಕ್ತ ಸಿರಿಯಾಳ ಶಿವ ಶಿವ ಎಂದರೆ ಭಯವಿಲ್ಲ lyrics Kannada


 

ಶಿವ ಶಿವ ಎಂದರೆ

ಭಯವಿಲ್ಲ ………..

ಶಿವ ಶಿವ ಎಂದರೆ ಭಯವಿಲ್ಲ

ನಾಮಕೆ ಸಾಟಿ ಬೇರಿಲ್ಲ

ಶಿವ ನಾಮಕೆ ಸಾಟಿ ಬೇರಿಲ್ಲ

ಶಿವ ಭಕ್ತನಿಗೆ

ನರಕ ಇಲ್ಲ…………

ಶಿವ ಭಕ್ತನಿಗೆ ನರಕ ಇಲ್ಲ

ಜನುಮ ಜನುಮಗಳ ಕಾಟವೇ ಇಲ್ಲ

ಶಿವ ಶಿವ ಎಂದರೆ ಭಯವಿಲ್ಲ

ನಾಮಕೆ ಸಾಟಿ ಬೇರಿಲ್ಲ

ಶಿವ ನಾಮಕೆ ಸಾಟಿ ಬೇರಿಲ್ಲ



ಅನ್ನ ದಾನವ ತೊರೆಯದಿರು

ನಾನು ನನ್ನದು ಎನ್ನದಿರು

ಅನ್ನ ದಾನವ ತೊರೆಯದಿರು

ನಾನು ನನ್ನದು ಎನ್ನದಿರು

ಉನ್ನತಿ ಸಾಧಿಸೆ

ಹಗಲಿರುಳು …… ....

ಉನ್ನತಿ ಸಾಧಿಸಿ ಹಗಲಿರುಳು

ದೀನನಾಥನ ಮರೆಯದಿರು…..


ಶಿವ ಶಿವ ಎಂದರೆ ಭಯವಿಲ್ಲ

ನಾಮಕೆ ಸಾಟಿ ಬೇರಿಲ್ಲ

ಶಿವ ನಾಮಕೆ ಸಾಟಿ ಬೇರಿಲ್ಲ .


ಭೋಗ ಭಾಗ್ಯದ ಬಲೆಯೊಳಗೆ

ಬಳಲಿ ಬಾಡದೇ ಇಳೆಯೊಳಗೆ

ಭೋಗ ಭಾಗ್ಯದ ಬಲೆಯೊಳಗೆ

ಬಳಲಿ ಬಾಡದೇ ಇಳೆಯೊಳಗೆ

ಕಾಯಕ ಮಾಡುತ

ಎಂದೆಂದೂ ….......

ಕಾಯಕ ಮಾಡುತ ಎಂದೆಂದೂ

ಆತ್ಮ ನಂದವ ಸವಿಯುತಿರು .....


ಶಿವ ಶಿವ ಎಂದರೆ ಭಯವಿಲ್ಲ

ನಾಮಕೆ ಸಾಟಿ ಬೇರಿಲ್ಲ

ಶಿವ ನಾಮಕೆ ಸಾಟಿ ಬೇರಿಲ್ಲ .



ದಾನವೇ ಜಗದೊಳು ತಪವಯ್ಯಾ

ಧ್ಯಾನವೇ ಘನಕರ ಜಪವಯ್ಯಾ

ದಾನವೇ ಜಗದೊಳು ತಪವಯ್ಯಾ

ಧ್ಯಾನವೇ ಘನಕರ ಜಪವಯ್ಯಾ

ಅಪಕಾರವ ನೀ

ಮಾಡಿದರೆ………

ಅಪಕಾರವ ನೀ ಮಾಡಿದರೆ

ಕೈಲಾಸವದು ಸಿಗದಲ್ಲ .


ಶಿವ ಶಿವ ಎಂದರೆ ಭಯವಿಲ್ಲ

ನಾಮಕೆ ಸಾಟಿ ಬೇರಿಲ್ಲ

ಶಿವ ನಾಮಕೆ ಸಾಟಿ ಬೇರಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು